Thursday, March 3, 2011

ಪುನೀತ್ ರಾಜ್ ಕುಮಾರ್ ರವರ ಜಾಕಿ ಸಿನಿಮಾದ ತೆಲುಗು ಅವತರಣಿಕೆ ಸಿದ್ದಗೊಂಡಿದೆ ಮತ್ತು ಮಳಯಾಳಂ ನಲ್ಲಿ ಸಿದ್ದಗೊಳ್ಳುತ್ತಿದೆ ತಮಿಳು ಭಾಷೆಯಲ್ಲಿ ಸಿದ್ದಗೊಳ್ಳುವ ಸಾಧ್ಯತೆಯಿದೆ . ಆಂಧ್ರದಲ್ಲಿ ತೆಲುಗು ಜಾಕಿಯು ಸುಮಾರು ಒಂದುನೂರು ಚಿತ್ರಮದಿರಗಳಲ್ಲಿ ಮಾರ್ಚ್ ೧೮ ರಂದು ತೆರೆಕಾಣುವ ನಿರೀಕ್ಷೆಯಿದೆ. ಮೊನ್ನೆಯಷ್ಟೇ ಆಂಧ್ರದಲ್ಲಿ ನಡೆದ ಜಾಕಿ ತೆಲುಗು ಧ್ವನಿ ಸುರಳಿ ಬಿಡುಗಡೆ ಸಮಾರಂಭದ ತುಣುಕುಗಳನ್ನು ಇಲ್ಲಿ ನೀಡಲಾಗಿದೆ, ವೀಕ್ಧಿಸಲು ಹಸಿರು ಬಣ್ಣದಲ್ಲಿರುವ ವೆಬ್ಸೈಟ್ ಲಿಂಕನ್ನು ಒತ್ತಿರಿ/ಕ್ಲಿಕ್ಕಿಸಿ.
http://www.youtube.com/watch?v=LmLvRvP6CFk&feature=related
http://www.youtube.com/watch?v=y7xBfvJ54kM

Wednesday, March 2, 2011


ಮಿಂಚಿ ಮರೆಯಾದ ಅಕ್ಕ ರಾಧಕ್ಕ ಮತ್ತೆ ಮಿಂಚುವರೇ?


ಶಿವಣ್ಣ ಎಂದರೆ ಏಕೋ ಸ್ವಲ್ಪ ಕರ್ನಾಟಕದ ಕಿವಿ ನೆಟ್ಟಗಾಗುತ್ತದೆ ಅಷ್ಟೇ ಏಕೆ ಒಮ್ಮೊಮ್ಮೆ ದಕ್ಷಿಣ ಭಾರತದ ಕಿವಿಯೂ ಕೂಡ ಅದರಲ್ಲೇನೋ ಇದೆ ಮಾಂತ್ರಿಕ ಶಕ್ತಿ ಎಂದರೆ ತಪ್ಪಾಗುವುದಿಲ್ಲಾ ಹೇಳಿ ಕೇಳಿ ರಾಜ್ ಕುಟುಂಬದವರಲ್ಲವೇ ಯಾವಾಗಲೂ ಅವರು ಕರ್ನಾಟಕದಲ್ಲಿ ರಾಜರಿದ್ದಂತೆಯೇ ಸರಿ. ಅವರ ಮೈಲಾರಿ ಸಿನಿಮಾ ಬ್ರೇಕ್ ನಂತರದ ಅವತಾರ ನಿಜಕ್ಕೂ ಚಿತ್ರಪ್ರೇಮಿಗಳಲ್ಲಿ ಕುತೂಹಲ ಕೆರಳಿಸಿದೆ.
೧೦ ವರ್ಷಗಳ ನಂತರದ ಶ್ರಮಕ್ಕೆ ಪ್ರತಿಫಲವಾಗಿ ಕಡೆಗೂ ಸೂಪರ್ ಸಿನಿಮಾದ ನಟನೆ ಹಾಗೂ ನಿರ್ಧೇಶನದ ಮೂಲಕ ಬ್ರೇಕ್ ದಕ್ಕಿಸಿಕೊಂಡ ರಿಯಲ್ ಸ್ಟಾರ್ ಉಪೇಂದ್ರರವರಿಗೆ ಜವಾಬ್ದಾರಿ ಹೆಚ್ಚಿದ್ದರೂ ಬಿಡುವು ಮಾಡಿ ಕೊಂಡಾದರೂ ತಮ್ಮ ಅಭಿಮಾನಿಗಳಲ್ಲೋಬ್ಬರಾದ ಅಪ್ಪು ಪುನೀತ್ ರವರ ಚಿತ್ರವನ್ನು ಕನಿಷ್ಠ ಪಕ್ಷ ಒಮ್ಮೆಯಾದರೂ ತಮ್ಮ ನಿರ್ಧೇಶನದ ಮೂಲಕ ನೋಡಬಯಸಿ ಕರ್ನಾಟಕಾ೦ಧ್ರ ಪುನೀತ್ ರಾಜ್ ಕುಮಾರ್ ಅಭಿಮಾನಿಗಳ ಪ್ರತಿನಿಧಿಗಳಾಗಿ ಕೋರಿಕೆ ಸಲ್ಲಿಸುತ್ತಿದ್ದೇವೆ.

Tuesday, December 21, 2010

ಸುಸ್ಥಿರ ತಾರೆ ಎಂದೆಂದಿಗೂ

ಕೆಲದಿನಗಳಿ೦ದೀಚೆಗೆ ಕನ್ನಡ ಚಿತ್ರರಂಗ ಕನ್ನಡ ಚಿತ್ರಗಳು ಪ್ರಕಾಶಿಸುತ್ತಿವೆ ಎಂದರೆ ತಪ್ಪಾಗಲಾರದು ತೀರ ಇತ್ತೀಚಿನ ಸೂಪರ್ ಸಿನಿಮಾವನ್ನೇ ತೆಗೆದುಕೊಳ್ಳಿ ಅದು ಮಾಡುತ್ತಿರುವ ಹೈಪ್ /ಕ್ರೇಜ್ ನೋಡಿದರೆ ಎಂಥವರನ್ನು ಅದೇನಿದೆಯೋ ನೋಡಬೇಕು ಎಂದು ಸೆಳೆಯುವ ಪ್ರಚಾರ ತಂತ್ರಗಾರಿಕೆ ಹಾಗೂ ಹತ್ತು ವರ್ಷಗಳ ನಂತರ ಉಪೇಂದ್ರ ಅವರ ನಿರ್ಧೇಶನವಾಗಿರುವುದರಿಂದಲೂ ಹೆಚ್ಚು ಸುದ್ದಿ ಮಾಡಿತು ಮತ್ತು ಆಧಾಯ ಕಾಣುವ ನಿರೀಕ್ಷೆಯನ್ನು ಹುಟ್ಟಿಸಿದೆ ಕೂಡ. ಪತ್ರಿಕೆಗಳು, ಜನರು, ಅಭಿಮಾನಿಗಳು ಹೇಳುತ್ತಿರುವ ಪ್ರಕಾರ ಒಮ್ಮೆಯಾದರೂ ಈ ೧೦ ವರ್ಷದ ನಂತರದ ನಿರ್ಧೇಶನದ ಚಿತ್ರವನ್ನು ನೋಡಲೇಬೇಕೆಂಬ ಆಶೆ ಹುಟ್ಟಿಸುತ್ತಿರುವುದನ್ನು ತಳ್ಳಿಹಾಕುವಂತಿಲ್ಲ. ಇಂಥ ರೀತಿಯ ಹೈಪ್ ಕ್ರಿಯೇಟ್ ಮಾಡುವುದರಲ್ಲಿ ಸಿದ್ದಹಸ್ತರೆಂದೆ ಹೆಸರುವಾಸಿಯಾಗಿರುವ ಮತ್ತೊಬ್ಬ ನಿರ್ಧೇಶಕ ಜೋಗಿ ಪ್ರೇಂ. ಕರ್ನಾಟಕದಲ್ಲಿ ಸದಾ ಪುನೀತ್ ಚಿತ್ರಗಳಿಗಿರುವ ಹೈಪ್/ಕ್ರೇಜ್ ಹಾಗೊಮ್ಮೆ ಹೀಗೊಮ್ಮೆ ಕೆಲ ಚಿತ್ರಗಳಲ್ಲಿ ಕಾಣಸಿಗುತ್ತದೆ. ಅದು ಅಪ್ಪುವಿಗೂ ಇಷ್ಟವಾಗುವ ನಟ ನಿರ್ಧೇಶಕ ಉಪೇಂದ್ರ ಅವರ ಸೂಪರ್ ಮೂಲಕ ಮತ್ತೆ ಸಾದ್ಯವಾಗಿರುವುದಕ್ಕೆ ಸಂತೋಷವಾಗಿದೆ ಈ ಸಂತಸಕ್ಕೆ ಮತ್ತೊಂದು ಮಹತ್ತರ ಅಂಸವೆಂದರೆ 'ಸೂಪರ್' ರಾಕ್ ಲೈನ್ ಪ್ರೋಡಕ್ಸನ್ ರವರ ೨೫ನೆ ಚಿತ್ರವಾದ್ದರಿಂದಲೂ ಕೂಡ. ಆದ್ದರಿಂದ ಅದ್ದೂರಿಗೆ ಹೆಚ್ಚು ಪ್ರಾಮುಖ್ಯತೆ ಕೊಡಲಾಗಿದೆ. ಹಾಗೂ ಇದೆ ರೀತಿಯ ಹೈಪ್/ಕ್ರೇಜ್ ಈಗಾಗಲೇ ಶಿವಣ್ಣನ ಮೈಲಾರಿಗೂ ಮುಂದುವರೆದಿರುವುದೂ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. ಇದರಿಂದ ತಾಜ್ಮಹಲ್ ನ ಚಂದ್ರುರವರೂ ಕೂಡ ಹೈಪ್ ಕ್ರಿಯೇಟ್ ಮಾಡಬಲ್ಲರು ಎಂಬುದು ಸಾಭೀತಾಯಿತು. ಬಹುಸಹ 'ಮೈಲಾರಿ' ಎಂಬ ಶೀರ್ಷಿಕೆಯೇ ಅಷ್ಟು ಹೈಪ್ ಕ್ರಿಯೇಟ್ ಆಗಲು ಸಹಕಾರ ನೀಡಿರಲೂಬಹುದು. ಇಂಥಹ, ಅಂಥಹ ಹೈಪ್ ಗಳ ನಡುವೆಯೂ ಹೈಪಿದ್ದರೂ ಅದರ ಶಬ್ದದ ಸದ್ದಿಲ್ಲದೇ ನಿಶಬ್ದವಾಗಿ ಮುನ್ನುಗ್ಗುತ್ತಿರುವ ಏಕೈಕ ಕನ್ನಡ ಚಿತ್ರವೆಂದರೆ ಸೂರಿಯವರ " ಜಾಕಿ " ಎನ್ನುವುದು ಅತಿಶಯೋಕ್ತಿಯಲ್ಲ. ಕನ್ನಡ ಚಿತ್ರಗಳನ್ನು ಮತ್ತಷ್ಟು ಅವಲೋಕಿಸಿದರೆ ಕಣ್ಮುಂದೆ ಬರುವುದು ಕೆಲ ಚಿತ್ರಗಳು ಪ್ರಾರ೦ಭದಲ್ಲಿ ಎಗ್ಗಿಲ್ಲದೆ ಸದ್ದು ಮಾಡಿ ಮಲಗುತ್ತವೆ, ಕೆಲ ಚಿತ್ರಗಳು ಸದ್ದೇ ಮಾಡದೆ ಶುರುವಾಗಿ ಕೆಲವಾರಗಳ ನಂತರ ಸದ್ದು ಮಾಡಲು ಶುರುಮಾಡುತ್ತವೆ ಆದರೆ ಪುನೀತ್ ಅವರ ಚಿತ್ರಗಳು ಆರಕ್ಕೆರಿದರೂ/ಒಮ್ಮೊಮ್ಮೆ ಏರದಿದ್ದರೂ, ಮೂರಕ್ಕಿಲಿಯುವ ಮಟ್ಟಕ್ಕೆ ಕಳಪೆಯಾಗಿರದೆ ಗುಣಮಟ್ಟಕ್ಕೆ ಹೆಚ್ಚು ಒತ್ತು ನೀಡಿರುತ್ತವೆ ಹಾಗೂ ಸುಸ್ಥಿರತೆಗೆ ಪ್ರಾಮುಖ್ಯತೆ ಕೊಟ್ಟು ನಿರ್ಮಾಣಗೊಂಡಿರುತ್ತವೆ ಹಾಗಾಗಿ ಎಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಸುಸ್ಥಿರತೆ ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗುತ್ತವೆ. ಆದ್ದರಿಂದಲೇ ಪುನೀತ್ರನ್ನು ಭಾರತದ ಕಾರ್ಪೋರೇಟ್ ವಲಯದವರು "ಸುಸ್ಥಿರ ತಾರೆ" ಎಂದು ಬಣ್ಣನೆ ಮಾಡುತಾರೆ ಇದು ಕನ್ನಡ ಚಿತ್ರರಂಗಕ್ಕೆ ಹೆಮ್ಮೆಯ ಕೊಡುಗೆಯಲ್ಲವೇ .

Friday, November 19, 2010

ಕನ್ನಡ=ಕನ್ನಡ, ಕರಿಯ= ಕರಿಯ !

ಅಪ್ಪುವಿನ ರಾಯಲ್ ಲುಕ್ ಇರುವ ಈ ದಿನದ ವಿಜಯ ನೆಕ್ಸ್ಟ್ ವಾರದ ಪತ್ರಿಕೆಯ ಮುಖ ಪುಟ ನೋಡಿ ಖುಸಿಯಾಗಿ ಇಲ್ಲಿಗೆ ಇಳಿಸಿದೆನು ಒಂದು ಆಂಗಲ್ ನಲ್ಲಿ ಸವಾರಿಯ ರಘುಮುಖರ್ಜಿಯನ್ನು ನೆನಪಿಸುತ್ತಾರೆ ಆಲ್ವಾ?

ಕರಿಯ ಕನ್ನಡಿಗ ರಜನೀಕಾಂತ್ ರವರು ಭಾರತಚಿತ್ರರಂಗದ ಮಾಧರಿ ಚಿತ್ರ ನಟರಲ್ಲಿ ಮಂಚೂಣಿಯಲ್ಲಿರುವ 'ಡಾಕ್ಟರ್. ರಾಜ್ ಕುಮಾರ್ ಅಭಿಮಾನಿಯಾಗಿದ್ದು' ರಾಜ್ ರಂತೆ ಇವತ್ತು ಗ್ಲೋಬಲ್ ನಟನಾಗಿದ್ದಾರೆ ಇವರನ್ನು ಭಾರತದ ಚಿತ್ರರಂಗದಲ್ಲಿ ಸೆಡ್ಡು ಹೊಡೆಯುವುದು, ಆ ರೀತಿ ಯೋಚಿಸಲು ಕಷ್ಟವಾಗುತ್ತದೆ, ಅವರ ನಟನೆಯ ತೀರಾ ಇತ್ತೀಚಿನ 'ಎಂದಿರನ್'/ರೋಬೋ /ರೋಬೋಟ್ ಚಿತ್ರ ಕೇವಲ ರಜನಿಯವರ ನಾಮ ಬಲದಿಂದಲೇ ಭಾರತದೆಲ್ಲೆಡೆ ಮಾಡುತಿದ್ದ ಸದ್ದಿಗೆ ಸ್ವಲ್ಪ ಸಪ್ಪೆಯಾಗಿದ್ದ ಕನ್ನಡ ಚಿತ್ರರಂಗ ಸಂಪೂರ್ಣ ಮಲಗಿ ಬಿಟ್ಟರೆ ಮುಂದಿನ ಗತಿಯೇನು ಎಂದು ಕೊರಗುತಿದ್ದ ಎಷ್ಟೋ ಕನ್ನಡ ಪ್ರೇಕ್ಷಕ ಮನಸ್ಸುಗಳು ದೈರ್ಯದಿಂದ ಹೆಮ್ಮೆ ಪಡಲು ಶುರು ಮಾಡಿದ್ದು 'ಜಾಕಿ' ಸಿನಿಮಾದ ಹಾಡುಗಳು ಬಿಡುಗಡೆಯಾಗಿ ಮನದ ಕದ ತಟ್ಟಿದ ದಿನದಿಂದ ಎಂದರೆ ಸುಳ್ಳಲ್ಲ . ಇಷ್ಟೊತ್ತಿಗಾಗಲೇ ಭಾರತದಲ್ಲಿ ಎಂದಿರನ್ ಸದ್ದು ಶುರುವಾಗಿತ್ತು. ಕನ್ನಡ ನಾಡಿನಲ್ಲೂ ಅಪ್ಪಳಿಸಲು ಸುರುವಾಗುತ್ತಿದ್ದ ವೇಳೆಗೆ ಬಿಡುಗಡೆಗೊಂಡ 'ಜಾಕಿ' ಯೂ 'ಎಂದಿರನ್ 'ನಂತೆ ಅಂತರಾಜ್ಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿಡುಗಡೆ ಭಾಗ್ಯ ಕಂಡು ಪ್ರಧರ್ಶನ ಕಾಣುತ್ತಿದ್ದರೂ 'ಎ೦ದಿರನ್ 'ನನ್ನು ಮನಸ್ಸಿಲ್ಲದ ಮನಸ್ಸಿನಿಂದ ಕರ್ನಾಟಕದ ಮಟ್ಟಿಗಾದರೂ 'ಓವರ್ ಟೆಕ್' ಮಾಡಿ ಕನ್ನಡ ಚಿತ್ರರಂಗ ಗರಿ ಗೆಧರುವಂತೆ ಮಾಡಿದವನೂ ಕೂಡ ಮತ್ತೊಬ್ಬ ಕರಿಯ ಕನ್ನಡಿಗ (ಅಪ್ಪು) ಪುನೀತ್ ರಾಜ್ ಕುಮಾರ್, ಇದು ಅನಿವಾರ್ಯವಾಗಿತ್ತು ಕೂಡ . ಅಂದ ಹಾಗೆ 'ಜಾಕಿ' ಕೇವಲ ಒಬ್ಬಿಬ್ಬರ ಪರಿಶ್ರಮದ ಚಿತ್ರವಲ್ಲ ಸಂಪೂರ್ಣ ಟೀಮ್ ವರ್ಕ್ ಚಿತ್ರವೆಂದು ಪ್ರಥಮವಾಗಿ ಸಾಭೀತು ಪಡಿಸಿದೆ 'ಜಾಕಿ ಚಿತ್ರತಂಡ' ಮತ್ತು "ಒಗ್ಗಟ್ಟಿನಲ್ಲಿ ಬಲವಿದೆ" ಎಂದು ಮತ್ತೊಮ್ಮೆ ಸಾಭೀತುಪಡಿಸಿದೆ ಹಾಗೂ ಇದನ್ನೇ ಮೂಲ ಧ್ಯೇಯವೆಂದು ಸದಾ ನಂಬಿರುವ "ಅಣ್ಣಾವ್ರ ಕುಟುಂಬದ ಚಿತ್ರ ನಿರ್ಮಾಣ ಸ೦ಸ್ಥೆ" . ಭಾರತ ಚಿತ್ರರಂಗದ ಸ೦ಸ್ಕ್ರುತಿ ರಾಯಭಾರಿಯಾಗಿ 'ರಜನಿಯಂತೆ ಪುನೀತ್ ಕೂಡ ಗ್ಲೋಬಲ್ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿರುವ ಎರಡನೆಯ ಕನ್ನಡದ ಕರಿಯನೆ೦ಬುದು ಭಾರತದ ಮಟ್ಟಿಗೆ ಸಂತಸದ ವಿಚಾರವೇ ಸರಿ ಏನಂತೀರಾ ಗೆಳೆಯರೇ ?

Sunday, September 5, 2010

ಸೂಪರ್ ಸ್ಟಿಲ್-ಜಾಕಿ


ವಯಕ್ತಿಕವಾಗಿಯೂ ಇದು ನನ್ನ ನೆಚ್ಚಿನ ಸ್ಥಿರ ಭಾವಚಿತ್ರ .

ಜೋಗಯ್ಯನ ಜಾತ್ರೆಯಲ್ಲಿ ಶಿವಣ್ಣನ ಹುಟ್ಟುಹಬ್ಬ




In picture: Rebel Star Ambhareesh+Karnaatakaandra Mega Star's in Jogaiah's festival.

In this festival tamil film star's Shivanna's fans Vijay and Surya participated as guests along with kannada's "super daimond sustainable power star" Puneeth Rajkumar.

ಇತ್ತೀಚಿಗೆ ಕನ್ನಡ ಚಿತ್ರರಂಗದಲ್ಲೇ ಪ್ರಪ್ರಥಮ ಭಾರಿಗೆ ದಕ್ಷಿಣ ಭಾರತದ ಚಿತ್ರರಂಗ ದಿಗ್ಗಜರ ಸಮಾಗಮವಾದದ್ದು, ಭಾರತ ಚಿತ್ರರಂಗದ ಹೆಮ್ಮೆಯ ಕಲಾವಿದ "ಅಣ್ಣಾವ್ರು"ಡಾ .ರಾಜ್ ಕುಮಾರ್ ರವರ ಪುಲಪುತ್ರ "ದಕ್ಷಿಣ ಭಾರತದ ಪವರ್ ಸೆಲ್ "ಶಿವ(ಅ)ಣ್ಣನ ಹುಟ್ಟುಹಬ್ಬಕ್ಕೆ ಮತ್ತು ಜೋಗಯ್ಯನ ಜಾತ್ರೆಗೆ.ಜೋಗಯ್ಯ-ಶಿವರಾಜ್ ಕುಮಾರ್ ರವರನ್ನು ಕುರಿತು ತಮ್ಮ ಅನುಭವದ ಅಭಿಪ್ರಾಯವನ್ನು ವ್ಯಕ್ತಪಡಿಸಲು ಮತ್ತು ತಮ್ಮೆಲ್ಲರ ಶುಭಾಷಯ ಕೋರಲು ನೆರೆಯ ತಮಿಳು ನಾಡು ಮತ್ತು ಆ೦ದ್ರದಿಂದ ಸ್ಟಾರ್ ಕಲಾವಿದರು ಆಗಮಿಸಿ ಜೋಗಯ್ಯ್ನ ಜಾತ್ರೆಯಲ್ಲಿ ಭಾಗವಾಗಿ ಪಾಲ್ಗೊಂಡರು. ಮಂಡ್ಯದ-ಗಂಡು ಅಂಬರೀಶ್ರವರು ಕಾರ್ಯಕ್ರಮದ ಮುಂದಾಳತ್ವವಹಿಸಿದ್ದರು. ಚಿರಂಜೀವಿಯವರಿಂದ ಜೋಗಯ್ಯನಿಗೆ ಕಿರೀಟಧಾರಣೆ ಮಾಡಿಸಿದರು. ಡಾ. ರಾಜ್ ಕುಟುಂಬದವರು, ಕನ್ನಡ ಚಿತ್ರರಂಗದ ಗಣ್ಯರು, ಜೋಗಯ್ಯನ ನಿರ್ಮಾಪಕರಾದ ರಕ್ಷಿತಾ,ಪ್ರೇಂ ಮತ್ತು ಅಭಿಮಾನಿಗಳು ಉಪಸ್ಥಿತರಿದ್ದರು. (ಚಿತ್ರದಲ್ಲಿ ಎಡದಿಂದ) ಕರ್ನಾಟಕದ ರೆಬೆಲ್ ಸ್ಟಾರ್ ಅಂಬರೀಶ್ +(ಕರ್ನಾಟಕ ಮೆಗಾ ಸ್ಟಾರ್ ಶಿವರಾಜ್ ಕುಮಾರ್ +ಆಂಧ್ರ ಮೆಗಾ ಸ್ಟಾರ್ ಚಿರಂಜೀವಿ)=ಕರ್ಣಾಟಕಾಂಧ್ರ ಮೆಗಾ ಸ್ಟಾರ್ಸ್ ರವರನ್ನು ಕಾಣಬಹುದು.

Friday, August 20, 2010

I am a farming labour too

At present I am practicing part-time farm labouring in our own agriculture land as farming assistant cum trainee, It is just like seasonal self-employment in agriculture field.