ಅಪ್ಪುವಿನ ರಾಯಲ್ ಲುಕ್ ಇರುವ ಈ ದಿನದ ವಿಜಯ ನೆಕ್ಸ್ಟ್ ವಾರದ ಪತ್ರಿಕೆಯ ಮುಖ ಪುಟ ನೋಡಿ ಖುಸಿಯಾಗಿ ಇಲ್ಲಿಗೆ ಇಳಿಸಿದೆನು ಒಂದು ಆಂಗಲ್ ನಲ್ಲಿ ಸವಾರಿಯ ರಘುಮುಖರ್ಜಿಯನ್ನು ನೆನಪಿಸುತ್ತಾರೆ ಆಲ್ವಾ?ಕರಿಯ ಕನ್ನಡಿಗ ರಜನೀಕಾಂತ್ ರವರು ಭಾರತಚಿತ್ರರಂಗದ ಮಾಧರಿ ಚಿತ್ರ ನಟರಲ್ಲಿ ಮಂಚೂಣಿಯಲ್ಲಿರುವ 'ಡಾಕ್ಟರ್. ರಾಜ್ ಕುಮಾರ್ ಅಭಿಮಾನಿಯಾಗಿದ್ದು' ರಾಜ್ ರಂತೆ ಇವತ್ತು ಗ್ಲೋಬಲ್ ನಟನಾಗಿದ್ದಾರೆ ಇವರನ್ನು ಭಾರತದ ಚಿತ್ರರಂಗದಲ್ಲಿ ಸೆಡ್ಡು ಹೊಡೆಯುವುದು, ಆ ರೀತಿ ಯೋಚಿಸಲು ಕಷ್ಟವಾಗುತ್ತದೆ, ಅವರ ನಟನೆಯ ತೀರಾ ಇತ್ತೀಚಿನ 'ಎಂದಿರನ್'/ರೋಬೋ /ರೋಬೋಟ್ ಚಿತ್ರ ಕೇವಲ ರಜನಿಯವರ ನಾಮ ಬಲದಿಂದಲೇ ಭಾರತದೆಲ್ಲೆಡೆ ಮಾಡುತಿದ್ದ ಸದ್ದಿಗೆ ಸ್ವಲ್ಪ ಸಪ್ಪೆಯಾಗಿದ್ದ ಕನ್ನಡ ಚಿತ್ರರಂಗ ಸಂಪೂರ್ಣ ಮಲಗಿ ಬಿಟ್ಟರೆ ಮುಂದಿನ ಗತಿಯೇನು ಎಂದು ಕೊರಗುತಿದ್ದ ಎಷ್ಟೋ ಕನ್ನಡ ಪ್ರೇಕ್ಷಕ ಮನಸ್ಸುಗಳು ದೈರ್ಯದಿಂದ ಹೆಮ್ಮೆ ಪಡಲು ಶುರು ಮಾಡಿದ್ದು 'ಜಾಕಿ' ಸಿನಿಮಾದ ಹಾಡುಗಳು ಬಿಡುಗಡೆಯಾಗಿ ಮನದ ಕದ ತಟ್ಟಿದ ದಿನದಿಂದ ಎಂದರೆ ಸುಳ್ಳಲ್ಲ . ಇಷ್ಟೊತ್ತಿಗಾಗಲೇ ಭಾರತದಲ್ಲಿ ಎಂದಿರನ್ ಸದ್ದು ಶುರುವಾಗಿತ್ತು. ಕನ್ನಡ ನಾಡಿನಲ್ಲೂ ಅಪ್ಪಳಿಸಲು ಸುರುವಾಗುತ್ತಿದ್ದ ವೇಳೆಗೆ ಬಿಡುಗಡೆಗೊಂಡ 'ಜಾಕಿ' ಯೂ 'ಎಂದಿರನ್ 'ನಂತೆ ಅಂತರಾಜ್ಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿಡುಗಡೆ ಭಾಗ್ಯ ಕಂಡು ಪ್ರಧರ್ಶನ ಕಾಣುತ್ತಿದ್ದರೂ 'ಎ೦ದಿರನ್ 'ನನ್ನು ಮನಸ್ಸಿಲ್ಲದ ಮನಸ್ಸಿನಿಂದ ಕರ್ನಾಟಕದ ಮಟ್ಟಿಗಾದರೂ 'ಓವರ್ ಟೆಕ್' ಮಾಡಿ ಕನ್ನಡ ಚಿತ್ರರಂಗ ಗರಿ ಗೆಧರುವಂತೆ ಮಾಡಿದವನೂ ಕೂಡ ಮತ್ತೊಬ್ಬ ಕರಿಯ ಕನ್ನಡಿಗ (ಅಪ್ಪು) ಪುನೀತ್ ರಾಜ್ ಕುಮಾರ್, ಇದು ಅನಿವಾರ್ಯವಾಗಿತ್ತು ಕೂಡ . ಅಂದ ಹಾಗೆ 'ಜಾಕಿ' ಕೇವಲ ಒಬ್ಬಿಬ್ಬರ ಪರಿಶ್ರಮದ ಚಿತ್ರವಲ್ಲ ಸಂಪೂರ್ಣ ಟೀಮ್ ವರ್ಕ್ ಚಿತ್ರವೆಂದು ಪ್ರಥಮವಾಗಿ ಸಾಭೀತು ಪಡಿಸಿದೆ 'ಜಾಕಿ ಚಿತ್ರತಂಡ' ಮತ್ತು "ಒಗ್ಗಟ್ಟಿನಲ್ಲಿ ಬಲವಿದೆ" ಎಂದು ಮತ್ತೊಮ್ಮೆ ಸಾಭೀತುಪಡಿಸಿದೆ ಹಾಗೂ ಇದನ್ನೇ ಮೂಲ ಧ್ಯೇಯವೆಂದು ಸದಾ ನಂಬಿರುವ "ಅಣ್ಣಾವ್ರ ಕುಟುಂಬದ ಚಿತ್ರ ನಿರ್ಮಾಣ ಸ೦ಸ್ಥೆ" . ಭಾರತ ಚಿತ್ರರಂಗದ ಸ೦ಸ್ಕ್ರುತಿ ರಾಯಭಾರಿಯಾಗಿ 'ರಜನಿಯಂತೆ ಪುನೀತ್ ಕೂಡ ಗ್ಲೋಬಲ್ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿರುವ ಎರಡನೆಯ ಕನ್ನಡದ ಕರಿಯನೆ೦ಬುದು ಭಾರತದ ಮಟ್ಟಿಗೆ ಸಂತಸದ ವಿಚಾರವೇ ಸರಿ ಏನಂತೀರಾ ಗೆಳೆಯರೇ ?